ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಭರ್ಜರಿ ಆಟ: ಎ ಪ್ಲಸ್’ ಒಪ್ಪಂದದ ಪಟ್ಟಿ ಸೇರಲಿದ್ದಾರಾ ಚೇತೇಶ್ವರ್ ಪೂಜಾರಾ?

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ನಲ್ಲಿ ಭಾರತ ತಂಡಕ್ಕೆ ಆಪತ್ಬಾಂಧವನಾಗಿದ್ದ ಚೆತೇಶ್ವರ್ ಪೂಜಾರ ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದು, ಅವರನ್ನು ಬಿಸಿಸಿಐ ನ ಎ ಪ್ಲಸ್ ಒಪ್ಪಂದದ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ.
ಚೇತೇಶ್ವರ್ ಪೂಜಾರಾ
ಚೇತೇಶ್ವರ್ ಪೂಜಾರಾ
ಆಸ್ಟ್ರೇಲಿಯಾ  ವಿರುದ್ಧದ ಟೆಸ್ಟ್ ನಲ್ಲಿ ಭಾರತ ತಂಡಕ್ಕೆ ಆಪತ್ಬಾಂಧವನಾಗಿದ್ದ ಚೆತೇಶ್ವರ್ ಪೂಜಾರ ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದು, ಅವರನ್ನು ಬಿಸಿಸಿಐ ನ ಎ ಪ್ಲಸ್ ಒಪ್ಪಂದದ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ. 
7 ಇನ್ನಿಂಗ್ಸ್ ಗಳಲ್ಲಿ ಚೇತೇಶ್ವರ್ ಪೂಜಾರಾ 521 ರನ್ ಗಳನ್ನು ಗಳಿಸಿದ್ದು 74.42 ಸರಾಸರಿ ಹೊಂದಿದ್ದಾರೆ.  ಚೇತೇಶ್ವರ್ ಪೂಜಾರ ಅವರ ಭರ್ಜರಿ ಆಟದ ಕಾರಣದಿಂದಾಗಿ ಭಾರತ ಆಸ್ಟ್ರೇಲಿಯಾ ನೆಲದಲ್ಲಿ ದೀರ್ಘಾವಧಿಯ ನಂತರ  ಇದೇ ಮೊದಲ ಬಾರಿಗೆ ಸರಣಿ ಗೆಲ್ಲುವುದಕ್ಕೆ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪೂಜಾರಾ ಅವರನ್ನು ವಿರಾಟ್ ಕೊಹ್ಲಿಯೇ ಮೊದಲಾಗಿ ಟಾಪ್ ಬ್ಯಾಟ್ಸ್ಮನ್ ಗಳಿರುವ  ಎ ಪ್ಲಸ್ ಒಪ್ಪಂದದ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಸಿಸಿಐ ನ ಬಿ ಶ್ರೇಣಿಯಲ್ಲಿ ಸ್ಥಾನ ಪಡೆದಿರುವ ಆಟಗಾರರು ಕ್ರಿಕೆಟ್ ನ ಯಾವುದೇ ಮಾದರಿಯಲ್ಲಿ ಆಡಲು ಆರ್ಹರಾಗಿರುತ್ತಾರೆ. ಅವರನ್ನು ಯಾವ ಮಾದರಿಗೆ ಬೇಕಾದರೂ ಆಯ್ಕೆ ಮಾಡಬಹುದಾಗಿದ್ದು ಸಂಭಾವನೆಯೂ ಹೆಚ್ಚಾಗಲಿದೆ. 
ಪೂಜಾರ ಪ್ರಸ್ತುತ ಎ ಶ್ರೇಣಿಯ ಒಪ್ಪಂದದಲ್ಲಿದ್ದು 5 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. 2018 ರಲ್ಲಿ ನವೀಕರಣಗೊಂಡ ಒಪ್ಪಂದದ ನವೀಕರಣದ ನಂತರ ಎ ಪ್ಲಸ್ ಒಪ್ಪಂದದ ವ್ಯಾಪ್ತಿಯಲ್ಲಿ ಬರುವ ಆಟಗಾರರಿಗೆ 7 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com